ಆಳಂದ ತಾಲೂಕಿನ ಗಡಿಗ್ರಾಮ ತಡೋಳಾ ಮರಾಠ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ತು ಚುನಾವಣೆ ನಡೆಯಿತು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಚುನಾವಣೆ ಪ್ರಕ್ರಿಯೆ ಮುಂದುವರಿದು, ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವತ್ತ ಇವುಗಳು ಸಹಾಯವದವು.
ಈ ಚುನಾವಣಾ ಪ್ರಕ್ರಿಯೆಗೆ ಮುಖ್ಯ ಶಿಕ್ಷಕ ಸುಭಾಷ್ ಕುಂಬಾರ ಅವರು PRO ಆಗಿ ಮಾರ್ಗದರ್ಶನ ನೀಡಿದರೆ, ಸಮಾಜ ಶಾಸ್ತ್ರ ಶಿಕ್ಷಕ ವಿಕಾಸ್ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಚುನಾವಣೆ ಸಂಬಂಧಿತ ನಿಯಮಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಶಿಕ್ಷಕರಾದ ವಿಕಾಸ ಇಂಡೆ, ನೀತಾ, ಹರಿ, ಸಾಜಿದ್ ಮತ್ತು ಸಿಂಧು ರವರ ಶಿಕ್ಷಕರ ತಂಡದ ಸಮರ್ಪಿತ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಶಾಲೆಯ ಕನ್ನಡ-ಮರಾಠಿ ಐಕ್ಯತೆ ಈ ಸಂದರ್ಭದಲ್ಲಿ ಬಹುಮಟ್ಟಿಗೆ ಬೆಳಕಿಗೆ ಬಂದು, ಸಾಂಸ್ಕೃತಿಕ ಏಕತೆಗೂ ಮೆರಗು ನೀಡಿತು. ಮಕ್ಕಳ ಉತ್ಸಾಹ ಮತ್ತು ಜವಾಬ್ದಾರಿಯಿಂದ ಶಾಲಾ ಪ್ರಜಾಪ್ರಭುತ್ವದ ಪಾಠವು ನೈಜ ಅರ್ಥ ಪಡೆದುಕೊಂಡಿತು.