ಬೆಂಗಳೂರು, ಜೂನ್ 30, 2025: ಶಿಕ್ಷಣದಲ್ಲಿ ಶ್ರೇಷ್ಟ ಸಾಧನೆ ಮಾಡಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ (Prize Money) ನೀಡಲಾಗುತ್ತಿದೆ. ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇದು ಬಹುಮುಖ್ಯ ಸಹಾಯಧನವಾಗಲಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ 2025–26ನೇ ಶೈಕ್ಷಣಿಕ ವರ್ಷದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿತವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಪ್ರೋತ್ಸಾಹಧನದ ವಿವರಗಳು:
ಅರ್ಹತೆ / ವಿದ್ಯಾ ಹಂತ | ಹಣಕಾಸು ಸಹಾಯಧನ (Prize Money) |
---|---|
2ನೇ ಪಿಯುಸಿ, 3 ವರ್ಷಗಳ ಪೊಲಿಟೆಕ್ನಿಕ್ ಡಿಪ್ಲೋಮಾ | ₹20,000 |
ಪದವಿ (Degree) | ₹25,000 |
ಸ್ನಾತಕೋತ್ತರ ಪದವಿ (MA, MBA, ಮುಂತಾದವು) | ₹30,000 |
ಕೃಷಿ, ಇಂಜಿನಿಯರಿಂಗ್, ವೆಟರಿನರಿ, ಮೆಡಿಸಿನ್ | ₹35,000 |
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಅರ್ಜಿ ಪ್ರತಿ
- ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಗಳ ಪ್ರತಿ
- ಎಲ್ಲ ದಾಖಲಾತಿಗಳನ್ನು ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಬೇಕು
ದೃಢೀಕೃತ ದಾಖಲೆಗಳನ್ನು ತಮ್ಮ ಕಾಲೇಜು ವ್ಯಾಪ್ತಿಗೆ ಸೇರಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.
ಪ್ರಮುಖ ಸೂಚನೆ:
ಆನ್‌ಲೈನ್ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಆಯ್ಕೆ ಪಟ್ಟಿಯಲ್ಲಿ ಕಾಣಿಸದಿದ್ದರೆ, ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನಿಮ್ಮ ಕಾಲೇಜಿನ ಹೆಸರನ್ನು ಇಲಾಖಾ ವೆಬ್‌ಸೈಟ್‌ಗೆ ಸೇರಿಸಬೇಕಾಗುತ್ತದೆ.
ಸಂಪರ್ಕ ಮಾಹಿತಿ:
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಿ.
ಆನ್‌ಲೈನ್ ಅರ್ಜಿ ಸಲ್ಲಿಸಲು ಲಿಂಕ್:
https://swdservices.karnataka.gov.in/PrizeMoneyClientApp/