ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಮದ್ಯದ ಚಟ ಬಿಡಿಸಲು ನಾಟಿ ವೈದ್ಯನೊಬ್ಬ ನೀಡಿದ ಔಷಧಿ ಸೇವನೆಯಿಂದ ಮೂವರು ವ್ಯಕ್ತಿಗಳು ಮೃತಪಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ.d
ಮೃತರಾದವರು
- ಲಕ್ಷ್ಮಿ ನರಸಿಂಹಲು ಬಟಗೇರಾ (55)
- ಬುರಗಪಳ್ಳಿ ಗ್ರಾಮನಾಗೇಶ (32)
- ಮದಕಲ್ ಗ್ರಾಮಗಣೇಶ್ ರಾಠೋಡ್ (30), ಡಕ್ಕಾ ತಾಂಡಾ, ಶಹಾಬಾದ್ ಬಳಿಯವರು
ಲಕ್ಷ್ಮಿಯವರ ಪುತ್ರ ಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಫಕೀರಪ್ಪ ಸಾಯಪ್ಪ ಎಂಬವರು ನಾಲ್ವರಿಗೆ ಮದ್ಯದ ಚಟ ಬಿಡಿಸಲು ನಾಟಿ ಔಷಧಿ ನೀಡಿದ್ದರು ಎನ್ನಲಾಗಿದ್ದು, ಭಾನುವಾರ ಔಷಧಿ ಪಡೆದಿದ್ದರು.
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.