ಆಳಂದ ನಲ್ಲಿ ಮುಕ್ತ ವಿದ್ಯಾಲಯ

ಆಳಂದ : ಪಣ್ಣದ ಸಮತಾ ಲೋಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ವಿಶ್ವವಿದ್ಯಾಲಯ ಮಟ್ಟದ ಪದವಿಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇವರ ಅಧಿನದ ಸಂಬುದ್ಧ ಅಧ್ಯಯನ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರದ ಸಂಯೋಜನಾಧಿಕಾರಿ ಡಾ. ಮೋನಪ್ಪ ಎಲ್. ಸುತಾರ ಮಾತನಾಡಿ ವಿಶ್ವವಿದ್ಯಾಲಯದ ಕಲಿಕಾರ್ಥಿ ಸಹಾಯಕ ಕೇಂದ್ರವಾಗಿದ್ದು. ಇಲ್ಲಿ ಯುಜಿ, ಪಿಜಿ ಹಾಗೂ ಡಿಪ್ಲೊಮಾ ಕೊರ್ಸು ಸೇರಿ 70 ಕ್ಕೂ ಹೆಚ್ಚು ಉಪಯುಕ್ತವಾದ ಕೋರ್ಸಗಳು ಲಭವಿದ್ದು, ತಾಲೂಕಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದರು.

ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಮಾತನಾಡಿ ರೆಗ್ಯೂಲರ ಕೋರ್ಸ್ ಗಳಿಗೆ ಸರಿಸಮಾನವಾದ ಕೋರ್ಸು ಇಲ್ಲಿರುವುದರಿಂದ ಯಾವುದೇ ವಯಸ್ಸಿನ ನಿಬಂರ್ಧವಿಲ್ಲದೆ ಮುಕ್ತವಾಗಿ ಜ್ಞಾನಾಜರ್ನೆ ಮಾಡಲು ಸಾಧ್ಯ. ಸರಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿರುವವರು ಇಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಜೈನುದೀನ ಮುಜಾವರ, ಸಂಜಯ ಪಾಟೀಲ, ನಾಗಣ್ಣ ಸಲಗರೆ, ಶಿವಲಿಂಗಪ್ಪ ಮಂಟಗಿ, ಶರಣ ಬಸಪ್ಪ ಇಟಗಿ, ಶಮ್ಮಶುದಿನ್ ಕಮಲಾಪೂರೆ, ರಾಜಕುಮಾರ ಸುರುವಸೆ, ಡಿ.ಎಂ.ಪಾಟೀಲ, ಶಿವಪುತ್ರಪ್ಪ ಅಲ್ದಿ, ಸತೀಶ ಕೋಗನೂರೆ, ಗೀತಾ ಎಸ್. ಮಂಟಗಿ, ಸತೀಶ ಮುಲಗೆ, ಉಪನ್ಯಾಸಕ ಉಪನ್ಯಾಸಕಿಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಗುರುಲಿಂಗಯ್ಯ ಅಳೋಳ್ಳಿಮಠ ನಿರೂಪಿಸಿದರು. ನಾಗರಾಜ ಘಂಟೆ ವಂದಿಸಿದರು.

ವರದಿ ಡಾ.ಅವಿನಾಶ್, S ದೇವನೂರ

Leave a Reply

Your email address will not be published. Required fields are marked *