ಆಳಂದ: ರಾಜ್ಯದ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಿವಾರಣೆಯ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಸಾವಳೇಶ್ವರ ಗ್ರಾಮದಲ್ಲಿ ನಡೆದ ಮಾದನಹಿಪ್ಪರಗಾ ವಲಯ ಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರ ಅವರು. “ಸಂಬಂಧಿತ ಶಿಕ್ಷಣ ಪಡೆದಿರುವ ಸುಮಾರು 2 ಲಕ್ಷ ಜನರು ರಾಜ್ಯದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕಳೆದ 15 ವರ್ಷಗಳಿಂದ ಸರ್ಕಾರದಿಂದ ಯಾವುದೇ ನೇಮಕಾತಿ ನಡೆದಿಲ್ಲ. ಈ ಪರಿಣಾಮವಾಗಿ ರಾಜ್ಯದ 60 ಲಕ್ಷ ಮಕ್ಕಳು ಆಟಗಳಿಂದ ವಂಚಿತರಾಗುತ್ತಿದ್ದಾರೆ. ಆಳಂದ ತಾಲ್ಲೂಕಿನಲ್ಲಿ ಮಾತ್ರವೇ ಸುಮಾರು 40 ರಿಂದ 50 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ.”ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ವೈಜನಾಥ ಝಳಕಿ ಅವರು, “ದೈಹಿಕ ಶಿಕ್ಷಕರು ಒಬ್ಬ ವಿದ್ಯಾರ್ಥಿಯ ಕ್ರೀಡಾ ಜೀವನದ ಮಾರ್ಗದರ್ಶಕರಾಗಿದ್ದಾರೆ. ಅವರು ಯೋಗ, ಆರೋಗ್ಯ ಶಿಕ್ಷಣ ಹಾಗೂ ಆಟೋಣೆಯ ಮೂಲಕ ಮಕ್ಕಳ ಸಮಗ್ರ ಅಭಿವೃದ್ದಿಗೆ ಸಹಾಯಕರಾಗುತ್ತಾರೆ,” ಎಂದು ಅಭಿಪ್ರಾಯಪಟ್ಟರು.ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಹಾಗೂ ಶಿಕ್ಷಕ ಚಂದ್ರಶೇಖರ ಪೂಜಾರಿ ಅವರು ದೈಹಿಕ ಶಿಕ್ಷಕರಿಗೆ ಬಡ್ತಿ ಇಲ್ಲದಿರುವುದು ಹಾಗೂ ಆಡಳಿತದ ಗಮನಾರ್ಹತೆಯ ಕೊರತೆಯನ್ನು ಉಲ್ಲೇಖಿಸಿದರು.ಸ್ಪರ್ಧೆಯಲ್ಲಿ ಸಾವಳೇಶ್ವರ ಶಾಲೆಯ ಮೆರಗುಮಾದರಿ ಪ್ರಾಥಮಿಕ ಶಾಲೆ ಸಾವಳೇಶ್ವರದ ವಿದ್ಯಾರ್ಥಿಗಳು ಬಾಲಕರ ಥ್ರೋ ಬಾಲ್, ಬಾಲಕಿಯರ ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರು. ಇವರ ಈ ಸಾಧನೆಗೆ ಮುಖ್ಯ ಗುರು ದಯಾನಂದ ಮೈಂದರಗಿ ಮತ್ತು ಶಿಕ್ಷಕರ ತಂಡ ಮಾರ್ಗದರ್ಶನ ನೀಡಿದರು.
ಸಹಕಾರ, ಬಹುಮಾನ ಹಾಗೂ ಸ್ಮರಣೀಕೆ ವಿತರಣೆ.
ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಿಂದ 500 ಕ್ರೀಡಾಪಟುಗಳಿಗೆ 1,000 ನಂದಿನಿ ಹಾಲು ಪ್ಯಾಕೆಟ್ ಮತ್ತು ಮಜ್ಜಿಗೆ ವಿತರಿಸಲಾಯಿತು. ಶಿವಲಿಂಗಪ್ಪ ನೆಲ್ಲಗಿ ಟ್ರೋಫಿಗಳನ್ನು ನೀಡಿ ವಿಜೇತರಿಗೆ ಗೌರವ ಸಲ್ಲಿಸಿದರು. ಶ್ರೀಶೈಲ ಸುತಾರ ಅವರು ಟಿ-ಶರ್ಟ್ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಗಪ್ಪ ಕೆರಮಗಿ, ರಾಜಕುಮಾರ ಝಳಕಿ, ರಾಜಕುಮಾರ ಚವ್ಹಾಣ, ಆನಂದ ದೇಶಮುಖ, ಸತೀಶ ಷಣ್ಮೂಖ, ಅಣ್ಣಪ್ಪ ಹಾದಿಮನಿ, ಮರೆಪ್ಪ ಬಡಿಗೇರಿ, ಮಲ್ಲಿನಾಥ ಖಜೂರಿ, ನರಸಪ್ಪ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
ಮಾದನಹಿಪ್ಪರಗಾ, ಮದಗುಣಕಿ, ಹಿರೋಳ್ಳಿ, ಸರಸಂಬಾ, ಅಂಬೆವಾಡ, ಬಿಮಪುರ, ಪಡಸಾವಳಿ, ಸಾವಳೇಶ್ವರ ಮುಂತಾದ ಗ್ರಾಮಗಳಿಂದ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಮೆರೆದರು.
ದೈಹಿಕ ಶಿಕ್ಷಕರ ನಿಯೋಜನೆ ಮತ್ತು ಪ್ರೋತ್ಸಾಹ ಅಗತ್ಯ
ಈ ಸಂದರ್ಭದಲ್ಲಿ ಮಾತನಾಡಿದ ಎಲ್ಲರು ದೈಹಿಕ ಶಿಕ್ಷಕರ ನೇಮಕಾತಿಯ ಅಗತ್ಯತೆಯ ಬಗ್ಗೆ ಒತ್ತಿಹೇಳಿ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.